
ಧಾರವಾಡ: ಚಲಿಸುತ್ತಿದ್ದ ಬೈಕನಲ್ಲಿ ಬೆಂಕಿ ಕಾಣಿಸಿಕೊಂಡು ರಸ್ತೆಯಲ್ಲಿ ಹೊತ್ತಿ ಉರಿದು ಘಟನೆ ಧಾರವಾಡದ ಕೆಲಗೇರಿ ರಸ್ತೆಯ ಅಂಜನೇಯ ನಗರದಲ್ಲಿಂದು ನಡೆದಿದ್ದು, ಬಾರಿ ಅನಾಹುತವೊಂದ ತಪ್ಪಿದಂತಾಗಿದೆ.
ಧಾರವಾಡದಿಂದ ಅಳ್ನಾವರ ಕಡೆ ತೆರಳುತ್ತಿದ್ದ ಬೈಕ್ ಬೆಂಕಿಗೆ ಆಹುತಿಯಾಗಿದೆ. ತಾಂತ್ರಿಕದೋಷದಿಂದ ಬೈಕನಲ್ಲಿ ಬೆಂಕಿ ಕಸಣಿಸಿಕೊಂಡಿದ್ದು, ಕೂಡಲೇ ಬೈಕ ಸವಾರ ಬೈಕ್ನ್ನು ರಸ್ತೆಯಲಗಲಿಯೇ ಬಿಟ್ಟು ಪಕಕ್ಕೆ ಬಂದು ಸ್ಥಳೀಯರ ಸಹಸಯ ಕೇಳಿದ್ದಾನೆ. ಕೂಡಲೇ ಅಲರ್ಟ್ ಆದ ಸ್ಥಳೀಯ ಜನತೆ ಹತ್ತಿರದಲ್ಲಿ ನೀರು ತುಂಬಿಕೊಂಡು ಹೊರಟ್ಟಿದ ಟ್ಯಾಕ್ಟರ್ ನಿಲ್ಲಿಸಿ ಅದೇ ನೀರಿನಿಂದ ಬೈಕ ಹತ್ತಿದ್ದ ಬೆಂಕಿ ನಂದಿಸಿ ಸಮಾಜಿಕ ಜವಾಬ್ದಾರಿ ಮೇರೆದಿದ್ದಾರೆ.
ಸದ್ಯ ಈ ಘಟನೆಯಲ್ಲಿ ಯಾರಿಗೂ ಪ್ರಾಣ ಹಾನಿ ವರದಿಯಾಗಿಲ್ಲ. ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೈಕ ಸವಾರನ ಹೆಸರು ಸೇರಿದಂತೆ ಜನನ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.