Uncategorized
ರಾಯಬಾಗ |3 ಲಕ್ಷ ಸಾಲಕ್ಕೆ 18 ಲಕ್ಷ ಬಡ್ಡಿ ವಸೂಲಿ |ರಾಯಬಾಗ್ ಪೊಲೀಸರಿಂದ ಇಬ್ಬರು ಅಕ್ರಮ ಲೇವಾದೇವಿಗಾರರ ಬಂಧನ..

ರಾಯಬಾಗ |3 ಲಕ್ಷ ಸಾಲಕ್ಕೆ 18 ಲಕ್ಷ ಬಡ್ಡಿ ವಸೂಲಿ |ರಾಯಬಾಗ್ ಪೊಲೀಸರಿಂದ ಇಬ್ಬರು ಅಕ್ರಮ ಲೇವಾದೇವಿಗಾರರ ಬಂಧನ…
ಕೌಟುಂಬಿಕ ಸಮಸ್ಯೆಗೆಂದು ಪಡೆದಿದ್ದ ಕೇವಲ 3 ಲಕ್ಷ ರೂಪಾಯಿ ಸಾಲಕ್ಕೆ, ಬರೋಬ್ಬರಿ 18 ಲಕ್ಷಕ್ಕೂ ಅಧಿಕ ಬಡ್ಡಿ ವಸೂಲಿ ಮಾಡಿ, ಅಷ್ಟಕ್ಕೇ ನಿಲ್ಲದೆ ಬಡ ಕಾರ್ಮಿಕನಿಗೆ ಜೀವ ಬೆದರಿಕೆ ಒಡ್ಡುತ್ತಿದ್ದ ಇಬ್ಬರು ಅಕ್ರಮ ಮೀಟರ್ ಬಡ್ಡಿ ದಂಧೆಕೋರರನ್ನು ರಾಯಬಾಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬುದ್ಧ ನಗರದ ನಿವಾಸಿಗಳಾದ ಆದಿತ್ಯ ಅಶೋಕ ಭೋಸಲೆ (25) ಮತ್ತು ಅಭಿಷೇಕ ಅಶೋಕ ಭೋಸಲೆ (25) ಬಂಧಿತ ಆರೋಪಿಗಳು. ಇವರೊಂದಿಗೆ ಶಾಮೀಲಾಗಿದ್ದ ಮತ್ತೊಬ್ಬ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳ ವಿರುದ್ಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಕರ್ನಾಟಕ ಅಕ್ರಮ ಲೇವಾದೇವಿ ನಿಷೇಧ ಕಾಯ್ದೆ-2004 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ…!



