Uncategorized

ಮಹಾರಾಷ್ಟ್ರದಾದ್ಯಂತ ಮಳೆ ಮುಂದುವರಿದಿದ್ದು, ಗಡಿನಾಡು ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ

ಚಿಕ್ಕೋಡಿ:ಮಹಾರಾಷ್ಟ್ರದಾದ್ಯಂತ ಮಳೆ ಮುಂದುವರಿದಿದ್ದು, ಗಡಿನಾಡು ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾ, ದೂಧಗಂಗಾ ಹಾಗೂ ವೇದಗಂಗಾ ನದಿಗಳಲ್ಲಿ ಇವತ್ತು ದಿಢೀರನೆ ;4 ಅಡಿಯಷ್ಟು ನೀರು ಏರಿಕೆ ಯಾಗಿದ್ದು, ನದಿತೀರದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಮಹಾರಾಷ್ಟ್ರದ ಜಲಾನಯನ ಪ್ರದೇಶದಿಂದ ಕೃಷ್ಣಾ ನದಿಗೆ ಕಲ್ಲೋಳ ಗ್ರಾಮದ ಹತ್ತಿರ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಸದ್ಯ ನದಿಗೆ ಸುಮಾರು 1 ಲಕ್ಷದ 22 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.ನದಿಗಳು ಉಕ್ಕಿ ಹರಿಯುತ್ತಿವೆ.
ಹಗಲು ರಾತ್ರಿ ಎನ್ನದೇ ಸಾವಿರಾರು ರೂಪಾಯಿ ಸಾಲ-ಸೋಲ ಮಾಡಿ ರೈತರು ಬೆಳೆದಿದ್ದ ಬೆಳೆಗಳು ಈಗ ನೀರಿಗೆ ಆಹುತಿಯಾಗಿವೆ. ನದಿತೀರದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಕಬ್ಬು, ಸೋಯಾಬೀನ್, ಶೇಂಗಾ, ಜೋಳ ಹಾಗೂ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಜಮೀನುಗಳಿಗೆ ಪ್ರವಾಹದ ನೀರು ನುಗ್ಗಿದೆ. ಕಣ್ಣೆದುರೇ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅನ್ನದಾತ ಸಂಕಷ್ಟದ ಸುಳಿಗೆ ಸಿಲುಕಿದ್ದಾನೆ

Related Articles

Leave a Reply

Your email address will not be published. Required fields are marked *

Back to top button