ಟೆಕ್ಸಾಸ್ ಸಂಸ್ಥೆಯಿಂದ ಶಿಂದೊಳ್ಳಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ

ಟೆಕ್ಸಾಸ್ ಸಂಸ್ಥೆಯಿಂದ ಶಿಂದೊಳ್ಳಿ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ
ಇಂದು ಶಿಂದೊಳ್ಳಿ ಗ್ರಾಮದ ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿರುವ ಅಮೇರಿಕಾದ ಸಂಸ್ಥೆಯಾದ ಟೆಕ್ಸಾಸ್ ಇನ್ಸಟ್ರೂಮೆಂಟ್ ಶಾಖೆಯಿಂದ ಹಾಗೂ ಯುಥ್ ಫಾರ್ ಸೇವಾ ಬೆಳಗಾವಿ ಇವರ ಸಹಯೋಗದಲ್ಲಿ ಸ್ಕೂಲ್ ಬ್ಯಾಗ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಶಿಂದೊಳ್ಳಿ ಗ್ರಾಮದ ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯ ವೀರಭದ್ರಯ್ಯ ಬಾಬು ಪೂಜಾರ SDMC ಅಧ್ಯಕ್ಷರಾದ ಮಾಳಿಗರಾಯ ಶಾಹಾಪೂರಕರ ಹಾಗೂ ಮುಖ್ಯೋಪಾಧ್ಯಾಯರಾದ ಅಶೋಕ ಹಂಚಿನಮನಿ ಇವರು ಮಾತನಾಡಿ ಸಂಸ್ಥೆಯ ಸಾಮಾಜಿಕ ಕಳಕಳಿಯ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಟೆಕ್ಸಾಸ್ ಸಂಸ್ಥೆಯ ಸಿಬ್ಬಂದಿವರ್ಗ, ಯುಥ್ ಫಾರ್ ಸೇವಾ ಸಿಬ್ಬಂದಿವರ್ಗ, ಭರತೇಶ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರಾದ ವೀಣಾ ಕರ್ಚಿ, SDMC ಉಪಾಧ್ಯಕ್ಷರಾದ ಸವಿತಾ ಪಾಟೀಲ, ಸದಸ್ಯರಾದ ಲಕ್ಷ್ಮೀ ಅಜರೇಕರ, ಸುಕನ್ಯಾ ಚಿಕ್ಕಮಠ, ಆಯಿಷಾ ಮುಲ್ಲಾ, ಗ್ರಾಮ ಆಡಳಿತಾಧಿಕಾರಿಗಳಾದ ವಿದ್ಯಾಸಾಗರ ಪಾಟೀಲ, ಶಂಕರ ನಾಯಕ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು ಶಿಕ್ಷಕರಾದ ದಾಮೋದರ ಬಡಿಗೇರ ಇವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು




