Uncategorized

ಬೆಳಗಾವಿ : ಸ್ಮಾರ್ಟ್ ಸಿಟಿಯಡಿಯ ಸಿಟೀಜ 2.0 ಯೋಜನೆ ಅನುಷ್ಠಾನದ ಕುರಿತು ಮಹಾನಗರ ಪಾಲಿಕೆಯಲ್ಲಿ ಸಭೆ ಜರುಗಿತು.

ಬೆಳಗಾವಿ : ಸ್ಮಾರ್ಟ್ ಸಿಟಿಯಡಿಯ ಸಿಟೀಜ 2.0 ಯೋಜನೆ ಅನುಷ್ಠಾನದ ಕುರಿತು ಮಹಾನಗರ ಪಾಲಿಕೆಯಲ್ಲಿ ಸಭೆ ಜರುಗಿತು.

ಪಾಲಿಕೆಯ ಮೇಯರ್ ಪ್ರೀತಿ ಕಾಮಕರ ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಎಂ.ಡಿ.ಕವಿತಾ ವಾರಂಗಲ್ ಸಭೆಗೆ ಮಾಹಿತಿ ನೀಡಿದರು.

ಘನ ತ್ಯಾಜ್ಯ ಸಂಸ್ಕರಣ ಘಟಕ ಸೇರಿದಂತೆ ಕ್ರಿಯಾಯೋಜನೆಗೊಳಪಡುವ  ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ, ಇ ತ್ಯಾಜ್ಯ ಸಂಗ್ರಹಣ ಘಟಕ, ಯಂತ್ರಗಳು, ವಾಹನಗಳು ಹಾಗೂ ಮಾನವ ಸಂಪನ್ಮೂಲದ ಅಗತ್ಯತೆ ಸೇರಿದಂತೆ ಮುಂತಾದ ಸಂಪನ್ಮೂಲಗಳ ಕುರಿತು ಚರ್ಚಿಸಲಾಯಿತು.

ಉಪ ಮಹಾಪೌರ ಹಣಮಂತ ಕೊಂಗಾಲಿ, ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ರಾಥೋಡ, ನಗರಸೇವಕ ರವಿ ಧೋತ್ರೆ, ತಾಂತ್ರಿಕ ವಿಭಾಗದ ಜಿ.ಎಂ. ವೀರೇಂದ್ರ ಹಿರೇಮಠ, ಪಾಲಿಕೆ ಪರಿಷತ್ ಕಾರ್ಯದರ್ಶಿ ಲಕ್ಷ್ಮೀ ನಿಪ್ಪಾಣಿಕರ್, ಅಭಿಯಂತರರಾದ ಪ್ರವೀಣ ಕಿಲಾರಿ, ಸಲ್ಮಾನ್ ಸಿಂದಗೀಕರ್, ವಿಶಾಲ ನಾರ್ವೆಕರ್, ಪ್ರತಾಪಸಿಂಗ್ ಜಾಧವ, ಪಾಲಿಕೆಯ ಮುಖ್ಯ ಲೆಕ್ಕ ಅಧಿಕಾರಿ  ಮಂಜುನಾಥ ಬೀಳಗಿಕರ್, ವ್ಯವಸ್ಥಾಪಕ ಅಭಿಷೇಕ ಕಂಗ್ರಾಳಿಕರ್ ಇತರೆ ಅಧಿಕಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button