Uncategorized

ಲಂಚದ ಬದಲು ಲೈಂಗಿಕ ಶೋಷಣೆ ನಡೆಸಿದ್ದ 13 ಕಾಮುಕರಿಗೆ ಹರಡಿದ ಹೆಚ್‌ಐವಿ (HIV)!

ಇದು ಓದಿದರೆ ಕಣ್ಣೀರು ತರಿಸುವ, ಕೇಳಿದರೆ ಇಡೀ ಸಮಾಜ ತಲೆತಗ್ಗಿಸುವಂತಹ ಅತ್ಯಂತ ಆಘಾತಕಾರಿ ಘಟನೆ. ಬದುಕು ಸಾಗಿಸಲು ಸರ್ಕಾರದಿಂದ ಸಿಗಬೇಕಾದ ಒಂದು ತುತ್ತು ಅನ್ನದ ರೇಷನ್ ಕಾರ್ಡ್ ಮತ್ತು ವಿಧವಾ ವೇತನಕ್ಕಾಗಿ ಕಚೇರಿ ಅಲೆದ ಅಸಹಾಯಕ ಹೆಣ್ಣುಮಗಳೊಬ್ಬಳನ್ನು ನಮ್ಮ ಆಡಳಿತ ವ್ಯವಸ್ಥೆ ಹೇಗೆ ನರಕಕ್ಕೆ ತಳ್ಳಿತು ಎಂಬುದಕ್ಕೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಈ ಘಟನೆಯೇ ಕರಾಳ ಸಾಕ್ಷಿ!
💔 ಅಸಹಾಯಕ ಬದುಕಿಗೆ ಕೊಳ್ಳಿ ಇಟ್ಟ ವಿಧಿ!
೨೦೧೨ರಲ್ಲಿ ಮದುವೆಯಾಗಿದ್ದ ಆಕೆಗೆ ೨೦೧೫ರಲ್ಲೇ ವಿಧವೆಯ ಪಟ್ಟ ಕಟ್ಟಿತು ವಿಧಿ. ಮುಂಬೈನಲ್ಲಿ ಕೂಲಿ ಮಾಡುತ್ತಿದ್ದ ಪತಿ ಅನಾರೋಗ್ಯದಿಂದ ತೀರಿಹೋದಾಗ, ಕೇವಲ ೨೭ ವರ್ಷದ ಆ ಯುವತಿ ಇಡೀ ಜಗತ್ತಿನಲ್ಲಿ ಒಂಟಿಯಾದಳು. ಯಾವುದೇ ಆಸ್ತಿ ಇಲ್ಲ, ಕೈಯಲ್ಲಿ ಕಾಸಿಲ್ಲ, ಹೊಟ್ಟೆಗೆ ಅನ್ನವಿಲ್ಲ. ಬದುಕು ಸಾಗಿಸಲು ಆಕೆ ಆಶ್ರಯಿಸಿದ್ದು ಸರ್ಕಾರದ “ವಿಧವಾ ವೇತನ” ಮತ್ತು “ಪಡಿತರ ಚೀಟಿ”ಯನ್ನು. ಆದರೆ ಆಕೆಗೆ ಗೊತ್ತಿರಲಿಲ್ಲ, ಅದೇ ಅರ್ಜಿ ಆಕೆಯ ಬದುಕನ್ನು ಜೀವಂತ ಹೆಣ ಮಾಡುತ್ತದೆ ಎಂದು!
🔥 ಲಂಚದ ಬದಲು ಶೀಲ ಕೇಳಿದ ಕಾಮುಕರು!
ಸಹಾಯ ಮಾಡಬೇಕಾಗಿದ್ದ ಸರ್ಕಾರಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಆಕೆಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡರು. ಕೆಲಸ ಮಾಡಿಕೊಡಲು ದುಡ್ಡು ಕೇಳುವ ಬದಲು, ಆಕೆಯ ಶೀಲಕ್ಕೆ ಕೈ ಹಾಕಿದರು. ಮುಂದಿನ ಮೂರು ವರ್ಷಗಳ ಕಾಲ ಸುಮಾರು ೧೧ ಮಂದಿ ನರರೂಪಿ ರಾಕ್ಷಸರು ಆಕೆಯನ್ನು ಲೈಂಗಿಕವಾಗಿ ಶೋಷಿಸಿದರು. ದಿನವೂ ತುತ್ತು ಅನ್ನಕ್ಕಾಗಿ ಬೇರೆ ದಾರಿಯಿಲ್ಲದೆ, ಆಕೆ ಆ ನರಕಯಾತನೆಯನ್ನು ಮೂಕ ಪ್ರಾಣಿಯಂತೆ ಸಹಿಸಿಕೊಂಡಳು.
⚠️ ಕರ್ಮದ ಫಲ: ಬಯಲಾಯ್ತು ಹೆಚ್‌ಐವಿ ಮಹಾಮಾರಿ!
೨೦೧೮ರಲ್ಲಿ ಆಕೆ ತೀವ್ರವಾಗಿ ಕಾಯಿಲೆ ಬಿದ್ದಾಗ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಆಗ ಆಕೆಗೆ ಹೆಚ್‌ಐವಿ (HIV) ಇರುವುದು ದೃಢಪಟ್ಟಿತು. ಕಂಗಾಲಾದ ವೈದ್ಯರು ಆಕೆಯನ್ನು ವಿಚಾರಿಸಿದಾಗ ಈ ಕರಾಳ ಕಥೆ ಹೊರಬಿದ್ದಿದೆ. ತಕ್ಷಣ ಎಚ್ಚೆತ್ತ ವೈದ್ಯಕೀಯ ತಂಡ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಆ ೧೧ ಮಂದಿ ಕಾಮುಕರನ್ನು ಪತ್ತೆ ಹಚ್ಚಿ ತಪಾಸಣೆ ನಡೆಸಿದಾಗ ಇಡೀ ವ್ಯವಸ್ಥೆಯೇ ನಡುಗುವ ಸತ್ಯ ಬಯಲಾಗಿದೆ. ಆಕೆಯನ್ನು ಭೋಗಿಸಿದ ಆ ೧೧ ನರಾಧಮರಿಗೂ ಹಾಗೂ ಇತರ ಇಬ್ಬರು ಸೇರಿದಂತೆ ಒಟ್ಟು ೧೩ ಮಂದಿಗೆ ಹೆಚ್‌ಐವಿ ಪಾಸಿಟಿವ್ ಬಂದಿದೆ!
ಒಂದು ಯಕ್ಷಪ್ರಶ್ನೆ…🤔
ಒಂದು ವೇಳೆ ಆಕೆಗೆ ಹೆಚ್‌ಐವಿ ಪತ್ತೆಯಾಗದೇ ಇರುತ್ತಿದ್ದರೆ, ಆಕೆ ಅನುಭವಿಸಿದ ಈ ನರಕಯಾತನೆ ಎಂದಿಗೂ ಸಮಾಜಕ್ಕೆ ತಿಳಿಯುತ್ತಲೇ ಇರಲಿಲ್ಲವೇನೋ! ಸರ್ಕಾರಿ ಸೌಲಭ್ಯಗಳಿಗಾಗಿ ಇನ್ನೂ ಎಷ್ಟು ಅಸಹಾಯಕ ಮಹಿಳೆಯರು ಇಂತಹದ್ದೇ ಮೂಕವೇದನೆಯನ್ನು ಅನುಭವಿಸುತ್ತಿರಬಹುದು? ಇಂತಹ ಎಷ್ಟು ಪ್ರಕರಣಗಳು ಇಂದಿಗೂ ಯಾರಿಗೂ ತಿಳಿಯದೆ ಸಮಾಧಿಯಾಗುತ್ತಿರಬಹುದು?
ಲಂಚದ ಆಸೆಗೆ ಹೆಣ್ಣಿನ ಶೀಲಕ್ಕೆ ಕೈ ಹಾಕಿ, ಇವತ್ತು ತಾವೂ ಬೀದಿಗೆ ಬಿದ್ದು, ತಮ್ಮ ಸಂಸಾರವನ್ನೂ ಬೀದಿಗೆ ತಂದಿರುವ ಈ ನಾಲಾಯಕ್ ಕಾಮುಕರಿಗೆ ಕಠಿಣ ಶಿಕ್ಷೆಯಾಗಲೇಬೇಕು.

Related Articles

Leave a Reply

Your email address will not be published. Required fields are marked *

Back to top button