Uncategorized

ಬೆಳಗಾವಿಯಲ್ಲಿ ನಕಲಿ ಜಿಪಿಎ ಸೃಷ್ಟಿಸಿ ಆಸ್ತಿ ನೋಂದಣಿ: ಇಬ್ಬರು ಖದೀಮರನ್ನು ಬಂಧಿಸಿದ ಮಾರ್ಕೆಟ್ ಪೊಲೀಸರು

ಬೆಳಗಾವಿಯಲ್ಲಿ ನಕಲಿ ಜಿಪಿಎ ಸೃಷ್ಟಿಸಿ ಆಸ್ತಿ ನೋಂದಣಿ: ಇಬ್ಬರು ಖದೀಮರನ್ನು ಬಂಧಿಸಿದ ಮಾರ್ಕೆಟ್ ಪೊಲೀಸರು
ಬೆಳಗಾವಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಕಲಿ ಜಿಪಿಎ (GPA) ತಯಾರಿಸಿ, ಸಾರ್ವಜನಿಕರ ಆಸ್ತಿಯನ್ನು ಕಾನೂನುಬಾಹಿರವಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದ ಜಾಲವನ್ನು ಮಾರ್ಕೆಟ್ ಠಾಣೆಯ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಫಿರ್ಯಾದಿ ಪರಶುರಾಮ ದೇವಾಪ್ಪ ದುಡುಮ ಎಂಬುವರ ಆಸ್ತಿಯನ್ನು ಕಬಳಿಸುವ ದುರುದ್ದೇಶದಿಂದ, ನಕಲಿ ಫೋಟೋ ಹಾಗೂ ಸಹಿ ಬಳಸಿ, ಮೂಲ ಆಸ್ತಿ ಮಾಲೀಕರಂತೆ ನಟಿಸಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜಿಪಿಎ ನೋಂದಾಯಿಸಿಕೊಂಡು ವಂಚಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಾರ್ಕೆಟ್ ಠಾಣೆಯ ಪೊಲೀಸರು, ನಕಲಿ ಜಿಪಿಎ ದಾಖಲೆಯಲ್ಲಿ ಫೋಟೋ ಹೊಂದಿದ್ದ ಪ್ರಮುಖ ಆರೋಪಿ ಇಸ್ಸಾಕ್ ಇಸ್ಮಾಯಿಲ್ ಮುಜಾವರ (43) ಹಾಗೂ ಈ ಕೃತ್ಯಕ್ಕೆ ನೆರವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಾಗರಾಜ ರಾಮಚಂದ್ರ ಕಡಕೋಳ (41) ಎಂಬುವರನ್ನು ಜುಲೈ 18 ರಂದು ಬಂಧಿಸಿದ್ದಾರೆ.
ಬಂಧಿತ ನಾಗರಾಜ ಕಡಕೋಳ ವಿರುದ್ಧ ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಮಾರ್ಕೆಟ್ ಠಾಣೆ ಇನ್ಸ್‌ಪೆಕ್ಟರ್ ಜೆ.ಎಮ್. ಕಾಳಿಮಿರ್ಚಿ, ಪಿಎಸ್‌ಐ ಹೆಚ್.ಎಲ್. ಕೆರೂರ ಹಾಗೂ ಸಿಬ್ಬಂದಿ ನಡೆಸಿದ ಈ ಯಶಸ್ವಿ ಕಾರ್ಯಾಚರಣೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button