Uncategorized
ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಆರೋಪಗಳನ್ನ ಮಾಡದಿರಲಿ:ಡಿ.ಕೆ.ಶಿವಕುಮಾರ್

ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಆರೋಪಗಳನ್ನ ಮಾಡದಿರಲಿ
ವಿಶೇಷ ಅಧಿವೇಶನದಲ್ಲಿ ರೈತರ ಹಿತದಲ್ಲಿ ಚರ್ಚಿಸಲಿ; ಸಿಎಂ ಡಿ.ಕೆ.ಶಿವಕುಮಾರ್
• ವಿಶೇಷ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಚರ್ಚೆ
• ಬರ ಪರಿಹಾರಕ್ಕಾಗಿ ಕೇಂದ್ರದ ನೆರವಿಗೆ ಆಗ್ರಹ
• ಕಸ್ತೂರಿ ರಂಗನ್ ವರದಿ ವಿರೋಧಿಸಿ ಆಕ್ಷೇಪಣೆ
• ಬೆಂಗಳೂರು ಅಭಿವೃದ್ಧಿಗೆ ಡಬಲ್ ಡಕ್ಕರ್ ಫ್ಲೈಓವರ್
ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ಕಸ್ತೂರಿ ರಂಗನ್ ವರದಿ ಗೊಂದಲದ ಕುರಿತು ಸರ್ಕಾರಿ ಮಟ್ಟದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದು, ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಸುಮ್ಮನೆ ಆರೋಪ ಮಾಡದೇ ವಿಶೇಷ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದ್ದು, ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮುಂದೆ ಬರಬೇಕು ಎಂದು ಆಹ್ವಾನಿಸಿದ್ದಾರೆ. ಕೇಂದ್ರ ಸರ್ಕಾರವು ಬರ ಪರಿಹಾರ ಮತ್ತು ಸಾಲ ಮನ್ನಾದ ಜವಾಬ್ದಾರಿಯನ್ನು ಹೊರಬೇಕಿದ್ದು, ಪ್ರಧಾನ ಮಂತ್ರಿಯವರು ಪರಿಸ್ಥಿತಿಯನ್ನು ಗಮನಿಸಿರುವುದರಿಂದ ಕೂಡಲೇ ಸೂಕ್ತ ಅನುದಾನ ಹಾಗೂ ನೆರವು ಬಿಡುಗಡೆ ಮಾಡಬೇಕು ಎಂದು ಅವರು ದೆಹಲಿಯಲ್ಲಿ ಕಳಕಳಿ ವ್ಯಕ್ತಪಡಿಸಿದ್ದಾರೆ. ಬೈಟ್
ಬೆಂಗಳೂರು ಅಭಿವೃದ್ಧಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳುತ್ತಿರುವ ಪ್ರಮುಖ ನಿರ್ಧಾರಗಳ ಕುರಿತು ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಸುಮ್ಮನೆ ಆರೋಪ ಮಾಡಬಾರದು.. ಕಬ್ಬನ್ ಪಾರ್ಕ್ ಜಾಗ, ಹೈಕೋರ್ಟ್ ಪಾರ್ಕಿಂಗ್, ಪ್ರೆಸ್ ಕ್ಲಬ್ ಹಾಗೂ ಇಂದಿರಾ ಗಾಂಧಿ ಫೌಂಟೇನ್ ಪಾರ್ಕ್ ಜಾಗಗಳ ಅಭಿವೃದ್ಧಿ ಕುರಿತು ಮಾತನಾಡುತ್ತಾ, ಒಂದೊಂದು ಕಾಮಗಾರಿಯ ಹಿಂದೆ ಸ್ಪಷ್ಟ ನಿಯಮಗಳು ಮತ್ತು ಚರ್ಚೆಗಳು ನಡೆದಿವೆ ಎಂದರು. ಅಲ್ಲದೆ, ಮೆಟ್ರೋ ಮತ್ತು ರಸ್ತೆ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಚೆನ್ನೈ ಮಾದರಿಯಲ್ಲಿ ಡಬಲ್ ಡಕ್ಕರ್ ಫ್ಲೈಓವರ್ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಬೈಟ್
ರೈತರ ಹಿತರಕ್ಷಣೆ ಮತ್ತು ಕಸ್ತೂರಿ ರಂಗನ್ ವರದಿ ವಿಚಾರವಾಗಿ ಮಾತನಾಡಿದ ಪಮುಖ್ಯಮಂತ್ರಿಗಳು, ಈ ಅಧಿವೇಶನದಲ್ಲಿ ನಾವು ಸಂಪೂರ್ಣವಾಗಿ ರೈತರ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ನಾವು ಮೊದಲೇ ವಿರೋಧಿಸಿದ್ದು, ಈ ವರದಿಯಿಂದ ರಾಜ್ಯದ ಸಾವಿರಾರು ಹಳ್ಳಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸುಮಾರು ಎರಡು ತಿಂಗಳ ಒಳಗಾಗಿ ನಮ್ಮ ಆಕ್ಷೇಪಣೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.



