Uncategorized
ಪ್ರೇಯಸಿಗೆ ಮರ್ಯಾದಾ ಹತ್ಯೆ ಹಿನ್ನಲೆ ಪ್ರಿಯತಮ ಆತ್ಮಹತ್ಯೆ

ಪ್ರೇಯಸಿಗೆ ಮರ್ಯಾದಾ ಹತ್ಯೆ ಹಿನ್ನಲೆ ಪ್ರಿಯತಮ ಆತ್ಮಹತ್ಯೆ
ಆಕೆಯ ಜನ್ಮದಿನದಂದೇ ನೇಣು ಬಿಗಿದುಕೊಂಡು ಆತ್ಮಹತ್ಯೆ
ಕೃಷ್ಣಾ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ.
ಕೆಲ ತಿಂಗಳುಗಳ ಹಿಂದೆ ಹುಕ್ಕೇರಿಯ ಸತ್ಯವ್ವಳನ್ನು ಮಹಾರಾಷ್ಟ್ರದಲ್ಲಿ ಮರ್ಯಾದಾ ಹತ್ಯೆ.
ಪ್ರೇಯಸಿಯ ಕೊಲೆ ಪ್ರಕರಣದ ನೋವು ತಾಳಲಾರದೆ ಆತ್ಮಹತ್ಯೆ
ಈತನು ರಾಯಬಾಗ ತಾಲ್ಲೂಕಿನ ಹುಬ್ಬರವಾಡಿ ಗ್ರಾಮದ ವಿವಾಹಿತೆ ಸತ್ಯವ್ವ ಹೆಳವಿಯನ್ನು ಪ್ರೀತಿಸುತ್ತಿದ್ದ
ಇಬ್ಬರೂ ಪರಸ್ಪರ ಒಪ್ಪಿಕೊಂಡು ಮನೆ ಬಿಟ್ಟು ಹೋಗಿದ್ದರು
ಪೊಲೀಸರು ಪತ್ತೆಹಚ್ಚಿ ಮನೆಗಳಿಗೆ ಕಳುಹಿಸಿದ್ದರು.
ಬಳಿಕ ಸತ್ಯವ್ವ ತವರು ಮನೆಯವರು ಆಕೆಯನ್ನು ಮಹಾರಾಷ್ಟ್ರದ ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ ಕೃಷ್ಣಾನನ್ನು ಬಿಟ್ಟು ಬೇರೆ ಮದುವೆಯಾಗುವಂತೆ ಒತ್ತಾಯಿಸಿದ್ದರು
ಆದರೆ ಕೃಷ್ಣಾನನ್ನು ಬಿಟ್ಟು ಬೇರೆ ಮದುವೆಯಾಗುವುದಿಲ್ಲ ಎಂದು ಸತ್ಯವ್ವ ಹಠ ಹಿಡಿದಿದ್ದಳು.
ಈ ಹಿನ್ನೆಲೆಯಲ್ಲಿ ಸತ್ಯವ್ವಳನ್ನು ತವರು ಮನೆಯವರೇ ಕೊಲೆ ಮಾಡಿದ್ದರು.
ಈ ಕುರಿತು ಕೃಷ್ಣಾ ಪಾಟೀಲ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿತರನ್ನು ಬಂಧಿಸಿ,
ಪ್ರಕರಣವನ್ನು ಮಹಾರಾಷ್ಟ್ರದ ಮಿರಜ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು.
ಇದರಿಂದ ಮನನೊಂದಿದ್ದ ಕೃಷ್ಣಾ ಪಾಟೀಲ, ಮೃತ ಸತ್ಯವ್ವಳ ಜನ್ಮದಿನಂದು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ



