Uncategorized
ಹಾವೇರಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ: ‘ಚೇಂಜ್’ ಕಾರಣಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ, ಬೀದಿಬದಿ ಹಿಂದೂ ವ್ಯಾಪಾರಿ ಸಾವು!

ಹಾವೇರಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ: ‘ಚೇಂಜ್’ ಕಾರಣಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ, ಬೀದಿಬದಿ ಹಿಂದೂ ವ್ಯಾಪಾರಿ ಸಾವು! 
ನರೇಗಲ್ ಕೋಮುಗಲಭೆಯ ಕಾವು ಆರುವ ಮುನ್ನವೇ ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ದುರ್ದೈವಿ ಘಟನೆ ಸಂಭವಿಸಿದೆ. ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಬೀದಿಬದಿ ವ್ಯಾಪಾರಿಯೊಬ್ಬರ ಮೇಲೆ ಮನಸ್ಸೋಇಚ್ಛೆ ಹಲ್ಲೆ ನಡೆಸಿ, ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಏನಿದು ಘಟನೆ?
ರಟ್ಟಿಹಳ್ಳಿ ಪಟ್ಟಣದ ಬೀದಿಬದಿ ವ್ಯಾಪಾರಿ ಶಿವಾಜಿರಾವ್ ಬೈರೋಜಿ (55) ಎಂಬುವವರ ಅಂಗಡಿಗೆ ನಾಲ್ವರು ಮುಸ್ಲಿಂ ಯುವಕರು ಮೊಟ್ಟೆ ಖರೀದಿಸಲು ಬಂದಿದ್ದರು. ಈ ವೇಳೆ ಹಣದ ವಿಚಾರವಾಗಿ ಗಲಾಟೆ ಶುರುವಾಗಿದೆ. “ನಾನು ಕೊಟ್ಟಿದ್ದು ₹500” ಎಂದು ವಾಸೀಮ್ ಎಂಬ ಯುವಕ ಜಗಳ ತೆಗೆದಿದ್ದಾನೆ. ಆದರೆ ವ್ಯಾಪಾರಿಯ ಮಗ “ನೀವು ಕೊಟ್ಟಿದ್ದು ₹100” ಎಂದಿದ್ದಾನೆ.
ಇದೇ ವಿಚಾರವಾಗಿ ಮಗನ ಜೊತೆ ಗಲಾಟೆ ದೊಡ್ಡದಾದಾಗ, ಜಗಳ ಬಿಡಿಸಲು ತಂದೆ ಶಿವಾಜಿರಾವ್ ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ನಾಲ್ವರು ಯುವಕರು ಶಿವಾಜಿರಾವ್ ಅವರ ಎದೆಗೆ ಕಾಲಿನಿಂದ ಒದ್ದು, ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಅನ್ನೋದು ಆರೋಪ. ಹಲ್ಲೆಯ ತೀವ್ರತೆಗೆ ಶಿವಾಜಿರಾವ್ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಆರೋಪಿಗಳು ಯಾರು?
ವಾಸೀಮ್ ಮುಲ್ಲಾ
ಸರ್ಪರಾಜ್ ಮುಲ್ಲಾ
ಸಾದಿಕ್ ಮುಲ್ಲಾ
ಶಿರಾಜ್ ಮುಲ್ಲಾ
ಕೃತ್ಯ ಎಸಗಿದ ತಕ್ಷಣ ನಾಲ್ವರೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸದ್ಯದ ಪರಿಸ್ಥಿತಿ:
ಮೃತ ಶಿವಾಜಿರಾವ್ ಅವರ ಮಗ ಭರತ್ ನೀಡಿದ ದೂರಿನ ಮೇರೆಗೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ ಹಾಗೂ ಎಸ್ಪಿ ಯಶೋದಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಶಿವಾಜಿರಾವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆಯಿಂದಾಗಿ ರಟ್ಟಿಹಳ್ಳಿ ಪಟ್ಟಣದಲ್ಲಿ ಸದ್ಯ ತೀವ್ರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದಾರೆ.



