Uncategorized
ಭರಮ್ಯಾನಟ್ಟಿ ಗ್ರಾಮದ ವಿವಾಹಿತೆಯನ್ನು ಓಡಿಸಿಕೊಂಡು ಹೋದ ಎಂಬ ಕಾರಣಕ್ಕೆ ಯುವಕನ ಮನೆ ಧ್ವಂಸ ಮಾಡಿದ್ದ ಪ್ರಕರಣದಲ್ಲಿ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಳಗಾವಿ: ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದ ವಿವಾಹಿತೆಯನ್ನು ಓಡಿಸಿಕೊಂಡು ಹೋದ ಎಂಬ ಕಾರಣಕ್ಕೆ ಯುವಕನ ಮನೆ ಧ್ವಂಸ ಮಾಡಿದ್ದ ಪ್ರಕರಣದಲ್ಲಿ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ವಿವಾಹಿತೆ ನಾಗವ್ವ ಎಂಬಾಕೆಯನ್ನು ಓಡಿಸಿಕೊಂಡು ಹೋಗಿದ್ದ ಯಲ್ಲಪ್ಪ ನಾಯಕ್ ಮನೆ ಮೇಲೆ ದಾಳಿ ಮಾಡಿ ಮನೆ ಧ್ವಂಸ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ನಾಗರಾಜ್ ನಾಯಕ, ರವಿ ಬೀಜಗತ್ತಿ, ಈಶ್ವರ ಮುಚ್ಚಂಡಿ ಎಂಬುವರನ್ನು ಬೆಳಗಾವಿಯ ಮಾರಿಹಾಳ ಠಾಣೆ ಪೊಲೀಸರಿಂದ ಬಂಧಿಸಲಾಗಿದೆ.
ಮೂರು ಆರೋಪಿ ಸೇರಿ ಹಲವರ ವಿರುದ್ಧ ಯಲ್ಲಪ್ಪ ತಂದೆಯಿಂದ ದೂರು ನೀಡಿದರು. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳ ಬಂಧಿಸಲಾಗಿದೆ. ಮೂವರು ಆರೋಪಿಗಳು ನಾಗವ್ವ ಮತ್ತು ಪತಿ ಬಸಪ್ಪ ಸಂಬಂಧಿಕರು ಎಂಬುವುದು ದೃಢವಾಗಿದೆ. ಇನ್ನು ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ.


