Uncategorized

ಹಾಡಹಗಲೇ ಕಾಲೇಜ್ ವಿದ್ಯಾರ್ಥಿನಿ ಮಾನಭಂಗಕ್ಕೆ ಯತ್ನಿಸಿದ ಆಟೋ ಚಾಲಕನಿಗೆ ಜೈಲು ಶಿಕ್ಷೆ

ಬೆಳಗಾವಿ: ಹಾಡಹಗಲೇ ಕಾಲೇಜ್ ವಿದ್ಯಾರ್ಥಿನಿ ಮಾನಭಂಗಕ್ಕೆ ಯತ್ನಿಸಿದ ಆಟೋ ಚಾಲಕನಿಗೆ 2ನೇ ಜೆಎಂಎಫ್ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿದೆ. ಜಾಫರ್ ಸಾದಿಕ್ ಮೈನುದ್ದೀನ್ ಕಂಚಿ ಶಿಕ್ಷೆಗೊಳಗಾದ ಅಪರಾಧಿ.
2019ರ ಜೂ.23ರಂದು ಕೇಂದ್ರ ಬಸ್ ನಿಲ್ದಾಣದಿಂದ ಕೋಟೆ ಕೆರೆ ರಸ್ತೆಯತ್ತ ನಡೆದುಕೊಂಡು ಹೊರಟಿದ್ದಾಗ ಮಳೆ ಬಂದ ಕಾರಣಕ್ಕೆ ವಿದ್ಯಾರ್ಥಿನಿ ಈತನ ಆಟೋ ಹತ್ತಿದ್ದಳು. ಈಕೆ ಒಂಟಿಯಾಗಿದ್ದನ್ನೇ ದುರುಪಯೋಗಪಡಿಸಿಕೊಂಡಿದ್ದ ಚಾಲಕ ಕೆಇಬಿ ಪವರ್ ಗ್ರೀಡ್ ಬಳಿ ಆಟೋ ನಿಲ್ಲಿಸಿ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ನ್ಯಾಯಾಧೀಶ ಗುರುಪ್ರಸಾದ ಸಿ. ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿದ್ದಾರೆ. ದಂಡದ ಮೊತ್ತದಲ್ಲಿ 19,000 ರೂ. ಸಂತ್ರಸ್ತೆಗೆ ನೀಡಲು ಆದೇಶಿಸಿದ್ದಾರೆ ಎಂದು ಸರ್ಕಾರದ ಪರ ವಾದ ಮಂಡಿಸಿದ್ದ ಸಹಾಯಕ ಅಭಿಯೋಜಕ ಮಹಾಂತೇಶ ಚಳಕೊಪ್ಪ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button