ರಾಜಕೀಯರಾಜ್ಯ

ಬೀದರ್‌ನಲ್ಲಿ SIR ಕೇಂದ್ರಕ್ಕೆ ಭಗವತ್ ಖೂಬಾ ದಿಢೀರ್ ಭೇಟಿ, BLOಗೆ ತರಾಟೆ – ಬೈಕ್ ಹತ್ತಿ ಓಡಿ ಹೋದ BLO..!!

ಬೀದರ್‌ನಲ್ಲಿ SIR ಕೇಂದ್ರಕ್ಕೆ ಭಗವತ್ ಖೂಬಾ ದಿಢೀರ್ ಭೇಟಿ, BLOಗೆ ತರಾಟೆ – ಬೈಕ್ ಹತ್ತಿ ಓಡಿ ಹೋದ BLO..!!
ಬೀದರ್: ವಿಶೇಷ ಮತದಾರರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದ್ದ ಕೇಂದ್ರಕ್ಕೆ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ದಿಢೀರ್ ಭೇಟಿ ನೀಡಿ, ಪ್ರಕ್ರಿಯೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ಖಚಿತ ಮಾಹಿತಿ ಮೇರೆಗೆ ಭೀಮನಗರದ 109ನೇ ಮತಗಟ್ಟೆ ವ್ಯಾಪ್ತಿಯ SIR ಕೇಂದ್ರಕ್ಕೆ ಭೇಟಿ ನೀಡಿದ ಖೂಬಾ, ಬೀದರ್ ಬೆಟರ್‌ಮೆಂಟ್ ಫೌಂಡೇಶನ್ ಕಚೇರಿಯಲ್ಲಿ SIR ಪ್ರಕ್ರಿಯೆ ನಡೆಸುತ್ತಿರುವುದೇಕೆ ಎಂದು ಸಂಬಂಧಿತ ಬಿಎಲ್‌ಒ ಅನಿಲಕುಮಾರ್ ಅವರನ್ನು ಪ್ರಶ್ನಿಸಿದರು.
ಒಂದೇ ಸ್ಥಳದಲ್ಲಿ ಸಾರ್ವಜನಿಕರನ್ನು ಸೇರಿಸಿ ಮತದಾರರ ಪರಿಶೀಲನೆ ನಡೆಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಚುನಾವಣಾ ಪ್ರಕ್ರಿಯೆ ನಿಯಮಾನುಸಾರ ನಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಫೌಂಡೇಶನ್ ಕಚೇರಿಯಲ್ಲಿ SIR ನಡೆಸುತ್ತಿರುವ ವಿಚಾರಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಖೂಬಾ ಅವರ ಪ್ರಶ್ನೆಗಳಿಗೆ ಉತ್ತರಿಸದೆ ಬಿಎಲ್‌ಒ ಅನಿಲಕುಮಾರ್ ಸ್ಕೂಟಿಯಲ್ಲಿ ಸ್ಥಳದಿಂದ ತೆರಳಿದರೆಂದು ತಿಳಿದುಬಂದಿದೆ.
ಸ್ಥಳದಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.

Related Articles

Leave a Reply

Your email address will not be published. Required fields are marked *

Back to top button